ಇಂದೂರ್
ಮಧ್ಯಪ್ರದೇಶದ ಒಂದು ಪಟ್ಟಣ ಹಾಗೂ ಜಿಲ್ಲೆ. ಸ್ವಾತಂತ್ರ್ಯಪೂರ್ವದ ಭಾರತದಲ್ಲಿ ಇಂದೂರ್ ಸಂಸ್ಥಾನದ ರಾಜಧಾನಿಯಾಗಿತ್ತು. ಸನ್ನಿವೇಶ: 22( 43 ಉ.ಅ.: 75( 54 ಪೂ.ರೇ. ಖಾನ ಮತ್ತು ಸರಸ್ವತೀ ನದಿಗಳ ಸಂಗಮದಲ್ಲಿದೆ. ಸಮುದ್ರಮಟ್ಟದಿಂದ 1738 ಎತ್ತರದಲ್ಲಿದೆ. ಮಧ್ಯಪ್ರದೇಶದ ಬೇಸಗೆ ರಾಜಧಾನಿ. ಜನಸಂಖ್ಯೆ ಸುಮಾರು 4 ಲಕ್ಷಕ್ಕೂ ಹೆಚ್ಚು. ಇಂದು ಇದೊಂದು ಪ್ರಮುಖ ವಾಣಿಜ್ಯ ಕೇಂದ್ರ. ಅನೇಕ ಹತ್ತಿ ಗಿರಣಿಗಳಿವೆ.

	25 ಕಿ.ಮೀ. ದೂರದಲ್ಲಿರುವ ಕಂಪಾಲದ ಜಮೀನ್ದಾರನೊಬ್ಬ ಒಂದು ಗ್ರಾಮವಾಗಿ ಇದನ್ನು ಸ್ಥಾಪಿಸಿದ (1715). 1741ರಲ್ಲಿ ಇಂದ್ರೇಶ್ವರನ ದೇವಸ್ಥಾನ ಕಟ್ಟಲಾಯಿತು. ಅದರಿಂದಲೇ ಪಟ್ಟಣಕ್ಕೆ ಆ ಹೆಸರು. 1964ರಲ್ಲಿ ಇಲ್ಲಿ ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿದೆ. ರಾಜಕುಮಾರರಿಗಾಗಿಯೇ ಎಂದು ಪ್ರಾರಂಭದಲ್ಲಿ ಮೀಸಲಾಗಿದ್ದ ಡೇಲಿ ಕಾಲೇಜು ಇಲ್ಲಿರುವ ಅಮೃತಶಿಲೆಯ ಸುಂದರ ಕಟ್ಟಡಗಳಲ್ಲೊಂದು.								
 (ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ